ಪಾರಮಿಗಳು
ಪಾರಮಿಗಳು ಹತ್ತು
ಅವು ಯಾವುವೆಂದರೆ :
1. ದಾನ ಪಾರಮಿ : ಶ್ರೇಷ್ಠವಾದುದರಲ್ಲಿ
ಶ್ರೇಷ್ಠವೆಂದರೆ ದಾನ ಹೃದಯ ಎಂದು
ಬೋಧಿಸತ್ತ್ವರ ಅಭಿಪ್ರಾಯ. ದಾನಕ್ಕಿಂತಲೂ ಬೇರಾವುದರಲ್ಲೂ
ಅಂತಹ ಆನಂದ ಅವರಿಗೆ ಲಭಿಸುವುದಿಲ್ಲ.
ಬೋಧಿಸತ್ತ್ವರು ನಿಸ್ವಾರ್ಥರಾಗಿ ದಾನ ಮಾಡುತ್ತಾರೆ. ದ್ವೇಷರಹಿತರಾಗಿ
ದಾನ ಮಾಡುತ್ತಾರೆ. ಸರ್ವರಿಗೂ
ದಾನ ಮಾಡುತ್ತಾರೆ. ಪ್ರಜ್ಞಾಪೂರ್ವಕವಾಗಿ
ದಾನ ಮಾಡುತ್ತಾರೆ. ಭಕ್ತಿಯಿಂದ,
ಮೈತ್ರಿಯಿಂದ, ಕರುಣೆಯಿಂದ, ಆನಂದದಿಂದ ದಾನ ಮಾಡುತ್ತಾರೆ.
ದಾನದಲ್ಲಿ ತಮ್ಮ ಐಶ್ವರ್ಯ, ಶರೀರ,
ತಮ್ಮ ಪತ್ನಿ ಪುತ್ರರು, ತಮ್ಮ
ಪ್ರಾಣ, ತಮ್ಮ ಮನಸ್ಸು, ತಮ್ಮ
ಕಾಲ, ತಮ್ಮ ಜ್ಞಾನ, ಒಟ್ಟಾರೆ
ತಮ್ಮ ಸರ್ವಸ್ವವನ್ನು ಪರರಿಗಾಗಿ ಧಾರೆ ಎರೆಯುತ್ತಾರೆ.
ನಿಜ ಹೇಳಬೇಕಾದರೆ ಪರರಿಗಾಗಿ
ಮಾತ್ರ ಜೀವಿಸುವ ಅದ್ವಿತೀಯ ಜೀವಿ
ಬೋಧಿಸತ್ತ್ವ.
2. ಶೀಲ ಪಾರಮಿ : ಪರರಿಗೆ
ಅಣು ಮಾತ್ರವೂ ನೋವನ್ನು
ಬಯಸದ ಬೋಧಿಸತ್ತ್ವರು ಅದಕ್ಕಾಗಿ ಶೀಲವಂತರಾಗುತ್ತಾರೆ. ಯಾವ
ರೀತಿಯಲ್ಲಿಯೂ ಕೆಟ್ಟ (ಪಾಪ) ಕಾರ್ಯ
ಮಾಡದೆ ತ್ರಿಕರಣ ಪೂರ್ವಕವಾಗಿ ಪರಿಶುದ್ಧರಾಗುತ್ತಾರೆ.
ಪ್ರಾಣ ನೀಡಲು ಸಿದ್ಧ, ನರಕ
ಪ್ರವೇಶಿಸಲೂ ಸಿದ್ಧ, ಆದರೆ ಪಾಪ
ಕಾರ್ಯಕ್ಕೆ ಸಿದ್ಧರಲ್ಲ. ಬೋಧಿಸತ್ತ್ವರು ಸರ್ವರೊಂದಿಗೆ ಆದರ್ಶವಾಗಿ ವ್ಯವಹರಿಸುತ್ತಾ ಶ್ರೇಷ್ಠ
ಗುರು, ಶ್ರೇಷ್ಠ ಪಿತ, ಶ್ರೇಷ್ಠ
ಮಿತ್ರರಾಗಿ ಶೀಲದ ಸುಗಂಧವನ್ನು ಎಲ್ಲೆಡೆ
ಹಂಚಿ ಶೀಲಕ್ಕೆ ಅಲಂಕಾರಪ್ರಾಯರಾಗಿರುತ್ತಾರೆ.
3. ನೆಖ್ಖಮ್ಮ ಪಾರಮಿ : ಪರರಿಗಾಗಿ
ಸರ್ವಸ್ವವನ್ನೂ ತ್ಯಾಗ ಮಾಡುವವನೇ ಸೇವೆಗಾಗಿ
ಅರ್ಹನಾಗಿರುತ್ತಾನೆ ಎಂದು ನಂಬಿರುವ ಮಹಾಬೋಧಿಸತ್ತ್ವರವರು
ಪರಹಿತಕ್ಕಾಗಿ ಮತ್ತು ಸಂಬೋಧಿ ಪ್ರಾಪ್ತಿಗಾಗಿ
ಎಲ್ಲಾ ಪ್ರಾಪಂಚಿಕ ಐಶ್ವರ್ಯ, ಅಂತಸ್ತು,
ಭೋಗ ಮತ್ತು ಸ್ವಾರ್ಥಗಳೆಲ್ಲವನ್ನು
ತ್ಯಜಿಸುತ್ತಾರೆ. ಪ್ರಪಂಚದ ಯಾವ ಸ್ಥಿತಿಯೂ,
ಯಾವ ಜೀವಿಯೂ, ಯಾವ
ವಸ್ತುವು ಅವರಿಗೆ ಸ್ವಾರ್ಥರನ್ನಾಗಿ ತಿರುಗಿಸಲು
ಅಸಾಧ್ಯ.
4. ಪ್ರಜ್ಞಾ ಪಾರಮಿ : ಸೂರ್ಯನನ್ನು
ಎಲ್ಲಾ ಗ್ರಹಗಳು ಹಿಂಬಾಲಿಸುವಂತೆ ಪ್ರಜ್ಞೆಯ
ಹಿಂದೆ ಎಲ್ಲಾ ಪಾರಮಿಗಳು (ಸದ್ಗುಣಗಳು)
ಕ್ರಿಯಬದ್ಧರಾಗುತ್ತವೆ. ಪ್ರಜ್ಞಾ (ಜ್ಞಾನ)ವುಳ್ಳವರಿಗೆ
ಯಾವ ಸಮಸ್ಯೆಯೂ ಇಲ್ಲ.
ಯಾವ ದುಃಖವೂ ಇಲ್ಲ.
ಏಕೆಂದರೆ ಸರ್ವ ಸದ್ಗುಣದ ಮೂಲ
ಪ್ರಜ್ಞಾ ಸರ್ವ ಸದ್ಗುಣಗಳ ಶಿಖರಪ್ರಙ್ಞ
ಬೋಧಿಸತ್ತ್ವರು ಪ್ರಜ್ಞೆಯ ಸಹಾಯದಿಂದ ಪ್ರಾಪಂಚಿಕ
ಜ್ಞಾನ ಮತ್ತು ಮಹಾ ಸಮ್ಮಾ
ಸಂಬೋಧಿಯ ಜ್ಞಾನ ಪಡೆದು ಅಸವಕ್ಷಯರಾಗಿ,
ಆ ಪ್ರಜ್ಞಾಬಲದಿಂದ ಬೋಧಿಸಿ
ಸರ್ವರನ್ನೂ ದುಃಖ ವಿಮುಕ್ತಿಗೊಳಿಸುತ್ತಾರೆ. ಎಲ್ಲಾ
ಬೋಧಿಸತ್ತ್ವರು ಪ್ರಜ್ಞಾವಂತರಾಗಿ ಅವರನ್ನು ಪರಿಪೂರ್ಣ ಗೊಳಿಸುತ್ತಾರೆ.
5. ವೀರ್ಯ ಪಾರಮಿ : ಪ್ರಯತ್ನಶೀಲತೆಯಿಂದಲೇ
ಪರಿಪೂರ್ಣತೆ ಎಂದು ಅರಿತು ಕ್ರಿಯಾಶಕ್ತಿಯ
ಸಾಕಾರರಾಗಿರುವ ಬೋಧಿಸತ್ತ್ವರು ತಮ್ಮ ಪ್ರಯತ್ನಶೀಲತೆಯಿಂದ ಸದಾ
ಪರಹಿತಕಾರ್ಯಗಳನ್ನು ಮಾಡುತ್ತಾ, ತಮ್ಮನ್ನು ಪರಿಪೂರ್ಣರಾಗಿಸಿಕೊಳ್ಳುತ್ತಾರೆ.
6. ಖಾಂತಿ
ಪಾರಮಿ : ಕ್ಷಮಾಶೀಲ ಸಹನೆಯಿಲ್ಲದೆ ಕರುಣಾ
ಹೃದಯ ಪರಿಪೂರ್ಣವಾಗಿ
ವಿಕಾಸ ಹೊಂದಲಾರದು ಎಂದು ಅರಿತಿರುವ
ಬೋಧಿಸತ್ತ್ವರು ಪರರು ಮಾಡುವ ಎಲ್ಲಾ
ಬಗೆಯ ಹಿಂಸೆಗಳನ್ನು, ಎಲ್ಲಾ ಬಗೆಯ ನಿಂದೆ,
ಎಲ್ಲಾ ಅಪಕಾರವನ್ನು, ಎಲ್ಲಾ ಬಗೆಯ ಕೃತಘ್ನ
ಕಠೋರತೆಗಳನ್ನು ದಯೆಯಿಂದ ಶಾಂತಚಿತ್ತದಿಂದ ಸಹಿಸಿ
ಮತ್ತೆ ಅವರನ್ನೇ ಪ್ರೀತಿಸುವಂತಹ ಅನುಪಮಜೀವಿಯಾಗಿರುತ್ತಾರೆ.
7. ಸಚ್ಚ ಪಾರಮಿ : ನುಡಿದಂತೆ
ನಡೆಯುವ, ನಡೆದಂತೆ ನುಡಿಯುವ, ನುಡಿದಂತೆ
ಸಮ್ಮಾ ಸಂಬೋಧಿಯನ್ನು ಪ್ರಾಪ್ತಗೊಳಿಸಿಕೊಳ್ಳುವ, ಪರರಿಗೆ ದುಃಖ ವಿಮುಕ್ತಿಗೆ
ಮಾರ್ಗದಶರ್ಿಯಾಗಿರುವ, ಮೃದುಭಾಷಿಗಳು, ಸುಮಧುರ ಭಾಷಿಗಳು, ಸತ್ಯವಂತರು,
ಸತ್ಯಸಂಧರು, ಲೋಕಕ್ಕೆ ಕೊಟ್ಟ ಮಾತು
ತಪ್ಪದವರು ಆಗಿರುವ ಬೋಧಿಸತ್ತ್ವರು ಸಚ್ಚ
ಮಾರ್ಗವನ್ನು ಪರಿಪೂರ್ಣಗೊಳಿಸಿ ಭವಿಷ್ಯದಲ್ಲಿ ತಥಾಗತರಾಗುತ್ತಾರೆ.
8. ಅಧಿಷ್ಠಾನ ಪಾರಮಿ : ದೃಢ
ನಿಧರ್ಾರವಿಲ್ಲದೆ ಯಾವ ಪಾರಮಿ (ಸದ್ಗುಣ)ಯೂ ಅಭಿವೃದ್ಧಿಯಾಗದು,
ಪರಿಪೂರ್ಣತೆಯನ್ನು ಗಳಿಸದು ಎಂದು ಸ್ಪಷ್ಟವಾಗಿ
ಅರಿತಿರುವ ಬೋಧಿಸತ್ತ್ವರು ತಮ್ಮ ಗುರಿಯಾದ ಸಮ್ಮಾ
ಸಂಬೋಧಿಯಲ್ಲಿ ಮತ್ತು ಮಾರ್ಗವಾದ ಪಾರಮಿಗಳಲ್ಲಿ
ಅಚಲವಾದ ವಜ್ರದಂತಹ ದೃಢನಿಧರ್ಾರ ತಾಳುತ್ತಾರೆ.
ದೃಢ ನಿಧರ್ಾರದಿಂದ ಬೇರೆಯವರು
ವರ್ಷಗಳಲ್ಲಿ ಮಾಡುವುದನ್ನು ದಿನಗಳಲ್ಲಿ ಸಾಧಿಸುತ್ತಾರೆ.
ದೃಢ ನಿಧರ್ಾರವುಳ್ಳವರು ಸುಖ ತ್ಯಾಗಕ್ಕೂ ಸಿದ್ಧರು.
ಮಹಾಶ್ರಮಕ್ಕೆ ಸಿದ್ಧ, ನರಕ ಪ್ರವೇಶಕ್ಕೆ
ಸಿದ್ಧ. ಆದರೆ ತಮ್ಮ ನಿಧರ್ಾರವನ್ನು
ಎಂದಿಗೂ ಬಿಡರು. ದೃಢ ನಿಧರ್ಾರಕ್ಕೆ
ಆದರ್ಶಪ್ರಾಯರು ಬೋಧಿಸತ್ತ್ವರು.
9. ಮೆತ್ತಾ ಪಾರಮಿ : ಸರ್ವರ
ಸುಖವೇ ಎನ್ನ ಸುಖ, ಸರ್ವ
ದುಃಖ ವಿಮುಕ್ತಿಯೇ ನನ್ನ ದುಃಖ ವಿಮುಕ್ತಿ.
ಸರ್ವರ ಉನ್ನತಿಯೇ ನನ್ನ ಉನ್ನತಿ
ಎಂಬ ಸುಂದರ ಮನೋವೃತ್ತಿ
ಬೋಧಿಸತ್ತ್ವರದು. ಈ ಮಹಾಭಾವದ
ಕರುಣೆಯಿಂದಲೇ ಅವರು ಬೋಧಿಸತ್ತ್ವರ ಹುಟ್ಟನ್ನು
ಪಡೆಯುತ್ತಾರೆ. ಎಲ್ಲಿಯವರೆಗೆ ಒಂದು ಜೀವಿಯ ಅಲ್ಪ
ದುಃಖ ಇರುವುದೋ, ಅಲ್ಲಿಯವರೆಗೆ ನನ್ನ
ಯೋಜನೆ ಅಪೂರ್ಣ ಎಂದು ನಂಬಿರುವ
ಬೋಧಿಸತ್ತ್ವರು. ಹೂವಿನಂತಹ ಕೋಮಲ ಹೃದಯವುಳ್ಳವರು
ಲೋಕಕಾರುಣಿಕನಾಥರು ಬೋಧಿಸತ್ತ್ವರು. ಅವರ ಕಾರ್ಯದ ಸ್ಫೂತರ್ಿಯೇ
ಈ ಶುದ್ಧ ಪ್ರೀತಿ
(ಮೈತ್ರಿ). ಅಷ್ಟೇ ಕಡು ಕಷ್ಟವಾಗಿರುವ
ಈ ಸಾಹಸ ಕೈಗೊಳ್ಳುತ್ತಾರೆ.
ಅವರಿಗೆ ಯಾವುದೇ ಅವಸ್ಥೆಯಿರಲಿ, ಮೈತ್ರಿಭಾವದಿಂದಲೇ
ಇರುತ್ತಾರೆ. ನಿಸ್ವಾರ್ಥ ಪ್ರೀತಿ, ದ್ವೇಷರಹಿತ
ಪ್ರೀತಿ. ಸರ್ವರಲ್ಲೂ ಪ್ರೀತಿ, ಜ್ಞಾನಯುತ
ಪ್ರೀತಿ, ಅಗಾಧವಾದ, ಅಸೀಮವಾದ ಸಂಪೂರ್ಣ
ಪ್ರೀತಿ ಅವರದು. ಈ ಶುದ್ಧಪೂರ್ಣ
ಪ್ರೀತಿಯನ್ನು ಪರಿಪೂರ್ಣಗೊಳಿಸಿ ಅವರು ಲೋಕಾನುಕಂಪವುಳ್ಳವ ರಾಗುತ್ತಾರೆ.
10) ಉಪೇಖ್ಖಾ ಪಾರಮಿ : ಜಗತ್ತಿನ
ಯಾವ ಸುಖದಿಂದಲೂ ಆಕಷರ್ಿಸಲಾಗದ,
ಜಗತ್ತಿನ ಯಾವುದರಿಂದಲೂ ಕಂಪಿತವಾಗದ, ಪ್ರಪಂಚದ ಯಾವ ಜೀವಿಯ
ಮೇಲೂ ಕೋಪಗೊಳ್ಳದ, ಯಾವ ದುಃಖದಿಂದಲೂ, ಕೂಡಿರದ
ಚಿತ್ತ, ಉಪೇಖ್ಖಾ ಚಿತ್ತ ಅಂತಹ
ಶಾಂತ ಸಮಚಿತ್ತತೆಯನ್ನು ಬೋಧಿಸತ್ತ್ವರು ಪಡೆದಿರುತ್ತಾರೆ. ಯಾವುದೇ ಸುಖ-ದುಃಖ-ಕಲ್ಮಶಗಳಿಲ್ಲದೆ ಅವರ ಚಿತ್ತ ನಿರ್ಮಲವಾಗಿರುತ್ತದೆ.
ನಿಸ್ವಾರ್ಥ ಮನೋಭಾವದ ಅವರು ದ್ವೇಷರಹಿತರಾಗಿರುತ್ತಾರೆ.
ಯಾವ ಸಂಕಷ್ಟಗಳಿಗೂ ಸಮಸ್ಯೆಗಳಿಗೂ
ಭೀತಿ ಪಡದ ಅಭಯರು. ಎಲ್ಲಾ
ದುಃಖಗಳಿಂದ ಮೀರಿದ ಅಶೋಕರು ಬೋಧಿಸತ್ತ್ವರು.
ಅವರು ಕಡುಕಷ್ಟಕರವಾಗಿರುವ ಉಪೇಖ್ಖಾ ಪಾರಮಿಯನ್ನು ಎಲ್ಲಾ
ಸಮ-ವಿಷಮ ಪರಿಸ್ಥಿತಿಯಲ್ಲಿ
ಹೊಂದಿ ಬಲಿಷ್ಠಚಿತ್ತವನ್ನು ಸಾಧಿಸಿ ಮುಂದೆ ಸಮ್ಮಾ
ಸಂಬುದ್ಧರಾಗಿ ಪರಿಪೂರ್ಣ ಪರಮಶಾಂತ ಸ್ವರೂಪಿಗಳಾಗುತ್ತಾರೆ.
ಈ ರೀತಿ
ಬೋಧಿಸತ್ತ್ವರು ಎಲ್ಲಾ ಪಾರಮಿಗಳನ್ನು ಪರಿಪೂರ್ಣಗೊಳಿಸಿ
ಸಮ್ಮಾ ಸಂಬುದ್ಧರಾಗುತ್ತಾರೆ. ಎಲ್ಲಾ ಜೀವಿಗಳಿಗೂ ಸುಖ
ನೀಡುವವ ರಾಗುತ್ತಾರೆ. ಎಲ್ಲರ ದುಃಖಗಳನ್ನು ವಿಮುಕ್ತಿಗೊಳಿಸಿ
ನಿಬ್ಬಾಣದಲ್ಲಿ ಪ್ರತಿಷ್ಠಿತರಾಗಲು ಸಹಾಯಕರಾಗುತ್ತಾರೆ. ಎಲ್ಲರಿಗೂ ಜ್ಞಾನ ನೀಡಬಲ್ಲ
ಪೂರ್ಣಪ್ರಜ್ಞರಾಗುತ್ತಾರೆ.

