ಬೋಧಿಸತ್ತ್ವ - ಒಂದು ಮಹಾನ್ ಆದರ್ಶ
ಬುದ್ಧರಾಗುವ ಮುನ್ನ ಭಗವಾನರಿಗೆ ಬೋಧಿಸತ್ತ್ವ
ಎಂದೇ ಕರೆಯುತ್ತಾರೆ. ಬೋಧಿಸತ್ತ್ವ ಎಂದರೆ ಭವಿಷ್ಯದ ಬುದ್ಧ
ಎಂದು ಹೇಳಬಹುದು. ಬೋಧಿಸತ್ತ್ವ ಈ
ಪದ ಪಾಳಿಯದು. ಸಂಸ್ಕೃತದಲ್ಲಿ
ಬೋಧಿಸತ್ತ್ವ ಅಥವಾ ಬೋಧಿಸತ್ತ ಎಂದು
ಕರೆಯುತ್ತಾರೆ. ಬೋಧಿ ಎಂದರೆ ಪರಮ
ಶ್ರೇಷ್ಠ ಜ್ಞಾನ. ಸತ್ತ್ವ ಎಂದರೆ
ಜೀವಿ. ಒಟ್ಟಾರೆ ಹೇಳುವುದಾದರೆ ಜ್ಞಾನದ
ಜೀವಿ ಎಂದು ಪದಶಃ ಅರ್ಥ
ಹೇಳಬಹುದು. ಸ್ವಲ್ಪ ವಿವರವಾದ ಅರ್ಥವೆಂದರೆ
ಲೋಕದ ಸರ್ವಜೀವಿಗಳನ್ನು ದುಃಖ ವಿಮುಕ್ತರನ್ನಾಗಿಸಲು, ನಿಬ್ಬಾಣಕ್ಕೆ
ಮಾರ್ಗದಶರ್ಿಯಾಗಲು, ಅದಕ್ಕೆ ಅತ್ಯವಶ್ಯಕವಾಗಿರುವ ಸಮ್ಮ
ಸಂಬುದ್ಧತ್ವವನ್ನು ಪ್ರಾಪ್ತಿಮಾಡಿ ಸಮ್ಮ ಸಂಬುದ್ಧರಾಗಲು ದೃಢಸಂಕಲ್ಪ
ಮಾಡಿರುವ ಜೀವಿ. ಆ ಮಹಾನ್
ಗುರಿಗೆ ಬೇಕಾದ ಅಸೀಮ ಕರುಣೆ,
ವಿಶಾಲಾನಂತ ಜ್ಞಾನವನ್ನು, ಅಪಾರ ಸಹನಾಶೀಲತೆ, ಶ್ರೇಷ್ಠ
ಶೀಲ, ಪರಮ ಶಾಂತಶೀಲತೆ ಮುಂತಾದ
ಪಾರಮಿ (ಪರಿಪೂರ್ಣ ಸದ್ಗುಣ)ಗಳನ್ನು
ಹೊಂದಿರುವ ಜೀವಿ. ಸಾಮಾನ್ಯ ಅರ್ಥದಲ್ಲಿ
ಬೋಧಿ ಪ್ರಾಪ್ತಿಗೆ ಇಚ್ಛಿಸುವ ವ್ಯಕ್ತಿಗಳಿಗೆ ಹೇಳುವುದಾದರೂ
ನಿಜ ಅರ್ಥದಲ್ಲಿ ಅದಕ್ಕೆ
ಬೇಕಾದ ಅರ್ಹಗುಣಗಳನ್ನು ಹೊಂದಿ ಭಗವಾನ್ ಬುದ್ಧರಿಂದಲೇ
ಅಂಗೀಕರಿಸಿ ಮುಂದೆ ಈ ಬೋಧಿಸತ್ತ್ವ
ಸಮ್ಮ ಸಂಬುದ್ಧನಾಗುವರು ಎಂದು ನಿಖರವಾಗುವವರಿಗೆ ಮಾತ್ರ
ಬೋಧಿಸತ್ತ್ವ ಎನ್ನುವರು.
ಬುದ್ಧತ್ವವು ಸಾಮಾನ್ಯವಾದುದಲ್ಲ. ಅದು ಬೇಗನೆ ಪ್ರಾಪ್ತವಾಗು
ವಂತಹುದು ಅಲ್ಲ. ಆ ಮಹಾ
ಪರ್ವತಕ್ಕೆ ಅಡ್ಡದಾರಿಗಳು ಇಲ್ಲ. ಬುದ್ಧತ್ವದ ಇಚ್ಛೆಯು
ಉಂಟಾಗುವ ಬಗೆಯು ಸುಲಕ್ಷಣವಾಗಿದೆ. ಬುದ್ಧರ
ಮಹೋನ್ನತೆ ಅರಿತು ಅವರಂತೆ ಆಗುವ
ಬಯಕೆ ಒಂದು ವಿಧವಾದರೆ, ಜಗತ್ತಿನ
ಜೀವಿಗಳು ದುಃಖದಿಂದ ನರಳುವುದನ್ನು ಕಂಡು
ಜಗತ್ತಿನ ಜೀವಿಗಳು ದುಃಖದಿಂದ ನರಳುವುದನ್ನು
ಕಂಡು ಜಗತ್ತಿನ ಜೀವಿಗಳ ದುಃಖ
ವಿಮುಕ್ತಿಗಾಗಿ ಬುದ್ಧರಾಗಲು ಪ್ರಯತ್ನಿಸುತ್ತಾರೆ. ಮತ್ತೆ ಕೆಲವರು ಪರಿಪೂರ್ಣತೆಯ
ಸ್ಥಿತಿಗೆ ಹಾತೊರೆದು ಬುದ್ಧರಾಗಲು ಇಚ್ಛಿಸುತ್ತಾರೆ.
ಬುದ್ಧತ್ವಕ್ಕಿಂತ ಪರಮಸ್ಥಿತಿಯಿಲ್ಲ. ಬುದ್ಧತ್ವಕ್ಕೆ ಮೀರಿದುದು ಯಾವುದೂ ಇಲ್ಲ.
ಬೇರೆಲ್ಲವೂ ಮಾನವನ ಅತೃಪ್ತಿಯನ್ನು ಅಶಾಂತಿಯನ್ನು
ಹೆಚ್ಚಿಸುತ್ತದೆ. ಆದರೆ ಬುದ್ಧತ್ವವು ಸರ್ವರಿಗೆ
ಪರಿಪೂರ್ಣ ಸುಖವನ್ನು, ಸರ್ವದುಃಖ ವಿಮುಕ್ತಿಯನ್ನು,
ಪರಿಪೂರ್ಣ ಪರಮೋನ್ನತಿಯನ್ನು ನೀಡುತ್ತದೆ. ಅದು ಪೂರ್ಣ ಶಾಂತ
ಸ್ಥಿತಿ. ಅದು ಮಹಾ ಕರುಣೆಯ
ಸಾಕಾರ ಸ್ಥಿತಿ. ಸರ್ವ ಅಲೌಕಿಕ
ಶಕ್ತಿಯ ಪರಮೋನ್ನತ ಸ್ಥಿತಿ. ಒಟ್ಟಾರೆ
ಹೇಳುವುದಾದರೆ ಪೂರ್ಣ ಜ್ಞಾನ - ಪೂರ್ಣಕರುಣೆಯ
ಅದ್ಭುತವಾದ ಸಂಗಮಸ್ಥಿತಿ. ಈ ಸಂಗಮದಿಂದ
ಉಂಟಾಗುವ ಸ್ಫೋಟವೇ ಧಮ್ಮ ಘೋಷಣೆ.
ಅಲ್ಲಿಂದ ಹೊರಹೊಮ್ಮುವ ಕೋಟಿ ಸೂರ್ಯರ ಪ್ರಕಾಶವೇ
ನಿಬ್ಬಾಣ ಪ್ರಾಪ್ತಿಯ ಜ್ಞಾನ. ಆ
ಅದ್ವಿತೀಯ ಅನುಭವ ಹೊಂದಿದವರೆ ಧನ್ಯರು.
ಅವರು ಮತ್ತೆ ಅವನತಿಗೆ ಇಳಿಯುವುದಿಲ್ಲ.
ಸದಾ ಮಂಗಳಕರ ವಾದುದನ್ನು
ಸಾಧಿಸಿ ಎಲ್ಲ ದುಃಖದಿಂದ ಮುಕ್ತರಾಗುತ್ತಾರೆ.
ಬೋಧಿಸತ್ತರು ತಮ್ಮನ್ನು ಹಾಗೂ ಪರರನ್ನೂ
ಭೇದಭಾವದಿಂದ ನೋಡುವುದಿಲ್ಲ - ನಾನು ಎಲ್ಲಾ ಜೀವಿಗಳಂತೆಯೆ,
ನಾನು ಸುಖವನ್ನು, ಶಾಂತಿಯನ್ನು ಇಚ್ಛಿಸುತ್ತೇನೆ,
ದುಃಖವನ್ನಲ್ಲ. ಈ ರೀತಿ
ನಾವೆಲ್ಲಾ ಒಂದೇ. ನಾನಾದರೂ ಒಬ್ಬ
ಜೀವಿ. ಆದರೆ ಇಲ್ಲಿ ಅಸಂಖ್ಯ
ಜೀವಿಗಳಿದ್ದಾರೆ. ಆದ್ದರಿಂದ ನನಗಿಂತ ಪರರಿಗೆ
ನಾನು ಮೌಲ್ಯವನ್ನು ನೀಡಬೇಕು. ನಾನಾದರೋ ದುಃಖದಿಂದ
ಮುಕ್ತನಾಗಬಲ್ಲೆ. ಆದರೆ ಸರ್ವರ ದುಃಖ
ವಿಮುಕ್ತಿ ಪ್ರಧಾನವಾಗಿದೆ. ಆದ್ದರಿಂದ ನಾನು ದುಃಖ
ವಿಮುಕ್ತ ಅರಹಂತನಾಗುವ ಬದಲು ಸಮ್ಮಸಂಬುದ್ಧ ಆಗುತ್ತೇನೆ
ಎಂದು ಚಿಂತಿಸುತ್ತಾರೆ.
ಈ ರೀತಿಯ
ಕರುಣೆ ಮತ್ತು ಜ್ಞಾನದ ಪ್ರಚ್ಛನ್ನತೆಯ
ಮನದಲ್ಲೆ ಆಳವಾಗಿ ಬೇರೂರುವ ಕಾಲಕ್ಕೆ
ಮನೋ ಪಣಿದಾನ ಕಾಲ
ಎನ್ನುತ್ತಾರೆ. ನಂತರ ಆ ಇಚ್ಛೆಯು
ಮಾತಿನಲ್ಲಿ ಪ್ರಕಾಶವಾಗುವ ಕಾಲಕ್ಕೆ ವಚಿ ಪಣಿದಾನ
ಕಾಲ ಎನ್ನುತಾರೆ. ನಂತರ
ಕಾಯದಲ್ಲಿ ಆಗಬೇಕಾದ ಅರ್ಹಗುಣಗಳನ್ನು ಸಾಧಿಸಿ,
ಸೇವಾಕಾರ್ಯಗಳು ಅಧಿಕವಾದಾಗ ಕಾಯಪಣಿಧಾನಕಾಲ ಎನ್ನುತ್ತಾರೆ.
ಬುದ್ಧರಿಂದ ಬೋಧಿಸತ್ತ್ವ ಎಂದು
ಅಂಗೀಕಾರವಾಗಬೇಕಾದರೆ ಎಂಟು ಗುಣಗಳು ಪೂರ್ಣವಾಗಬೇಕಾಗುತ್ತದೆ,
ಅದೆಂದರೆ :-
1. ಆತನು ಮಾನವನಾಗಿರಬೇಕು.
2. ಆತನು ಪುರುಷನಾಗಿರಬೇಕು.
3. ಆತನು ತಿಹೇತುಕ - ಪಟಿಸಂದಿ
- ಪುಗ್ಗಲನಾಗಿರಬೇಕು. ಅಂದರೆ ಅದ್ವೇಷ, ಅಲೋಭ
ಮತ್ತು ಅಮೋಹದಿಂದ ಹುಟ್ಟಿರಬೇಕು. ಅಂತಹ
ವ್ಯಕ್ತಿ ಯಾವಾಗ ಬೇಕಾದರೂ ಅರಹಂತನಾಗುವ
ಸಾಮಥ್ರ್ಯ ಪಡೆದಿರುತ್ತಾನೆ.
4. ಆ ಬೋಧಿಸತ್ತ್ವ
ಭಗವಾನ್ ಬುದ್ಧರನ್ನು ಮುಖಾಮುಖಿಯಾಗಿ ಭೇಟಿಯಾಗಿ ಬುದ್ಧರಿಂದ ಅಂಗೀಕಾರ
ಮಾಡಿಕೊಂಡಿರಬೇಕು.
5. ಆತನು ಭಿಕ್ಷುವಾಗಿ ಅದಕ್ಕೆ
ಅನುಗುಣವಾದ ಪರಿಶುದ್ಧ ಮತ್ತು ಸೇವಾಯುತ
ಜೀವನವನ್ನು ನಡೆಸಬೇಕು.
6. ಆತನು ದೃಢ ಪರಿಶ್ರಮದಿಂದ
ಅಷ್ಠಸಮಾಪತ್ತಿ ಧ್ಯಾನವನ್ನು ಪ್ರಾಪ್ತಿಮಾಡಿ ಅಭಿಜ್ಞಾ (ಪವಾಡ) ಶಕ್ತಿಯನ್ನು
ಗಳಿಸಿರಬೇಕು.
7. ಬುದ್ಧರಲ್ಲಿ ಅದ್ವಿತೀಯ ಭಕ್ತಿಯುಳ್ಳವನಾಗಿ ಅವರಿಗಾಗಿ
ಪ್ರಾಣ ಕೊಡಲು ಸಹಾ ಸಿದ್ಧನಾಗಿರಬೇಕು.
8. ಬೋಧಿಸತ್ತ್ವರಿಗೆ ಅತ್ಯಂತ ಅವಿಚಲವಾದ ವಜ್ರದಂತಹ
ದೃಢ ನಿಧರ್ಾರವಿರಬೇಕು. ತಮ್ಮ
ಗುರಿ ಪ್ರಾಪ್ತಿಗಾಗಿ ಘೋರ ಸಂಕಷ್ಟಗಳು, ನರಕಗಳನ್ನು
ಅನುಭವಿಸಲು ಸಿದ್ಧನಾಗಿರಬೇಕು.
ಈ ರೀತಿಯ
ಅರ್ಹ ಗುಣಗಳನ್ನು ಪೂರ್ಣಗೊಳಿಸಿಕೊಂಡು ಸುಮೇಧ
ಬೋಧಿಸತ್ತ್ವರು ಬುದ್ಧ ದೀಪಂಕರರವರಿಂದ ಭವಿಷ್ಯ
ಬುದ್ಧ ಎಂದು ಅಥವಾ ಮಹಾ
ಬೋಧಿಸತ್ತ್ವ ಎಂದು ಕರೆಸಿಕೊಂಡರು. ಮುಂದೆ
24 ಬುದ್ಧರಿಂದ ಈ ರೀತಿ
ನಿಶ್ಚಯಿಸಲ್ಪಟ್ಟು ಕೊನೆಗೆ ವೆಸ್ಸಂತರ ಜನ್ಮದಲ್ಲಿ
ಮಹಾದಾನಗೈದು, ತುಸಿತ ಲೋಕದಲ್ಲಿ ಪ್ರಭಾಫಲ
ದೇವನಾಗಿ ಹುಟ್ಟಿದರು. ನಂತರ ಅಂತಿಮ ಜನ್ಮದಲ್ಲಿ
ಸಿದ್ಧಾರ್ಥಗೋತಮ ಸಮ್ಮ ಸಂಬುದ್ಧರಾದರು.
ಬೋಧಿಸತ್ತ್ವರಾದ ಮೇಲೆ ಅವರು ಪಾರಮಿಗಳನ್ನು
ಅಂದರೆ ಸಮ್ಮಾ ಸಂಬೋಧಿತ್ವವನ್ನು ಸಾಧಿಸಲು
ಬೇಕಾದ ಸದ್ಗುಣದ ಪರಿಪೂರ್ಣತೆಗಳನ್ನು ಸಾಧಿಸಬೇಕಾಗುತ್ತದೆ.
ಪಾರಮಿಗಳು ಮೂರು ಹಂತದಲ್ಲಿರುತ್ತವೆ. ಪಾರಮಿ,
ಉಪ ಪಾರಮಿ, ಪಾರಮಿತ
ಪಾರಮಿ.

No comments:
Post a Comment