Tuesday, 26 November 2019

ದಾನಿಯು ಪ್ರಜ್ಞಾವಂತನಾಗಿರಬೇಕು ಹೊರತು ಮೂರ್ಖನಾಗಬಾರದು

ದಾನಿಯು ಪ್ರಜ್ಞಾವಂತನಾಗಿರಬೇಕು ಹೊರತು ಮೂರ್ಖನಾಗಬಾರದು

ದಾನ ನೀಡುವುದೇ ಪರಹಿತಕ್ಕಾಗಿಯೇ. ಹಾಗಿರುವಾಗ ನಾವು ಆ ದಿಕ್ಕಿನಲ್ಲಿ ಜೀವಿಸುವಾಗ, ಪ್ರಜ್ಞಾಶೀಲತೆ ಬಳಸಿ ಸಾಧ್ಯವಾದಷ್ಟು ಪರರಿಗೆ ಹಿತವಾಗುವ ರೀತಿಯಲ್ಲಿ ಜೀವಿಸಬೇಕಾಗುತ್ತದೆ. ದಾನದಲ್ಲಿ ಅಥವಾ ಸಹಾಯದಲ್ಲಿ ಪ್ರಜ್ಞಾ ಇಲ್ಲದಿದ್ದರೆ ಅದು ಅಪಾಯಕ್ಕೂ ಎಡೆಮಾಡಿಕೊಡಬಹುದು. ಅದಕ್ಕಾಗಿ ಈ ಜಾತಕವೇ ಸಾಕ್ಷಿಯಾಗಿದೆ.
ಬಹುಕಾಲದ ಹಿಂದೆ ಬೋಧಿಸತ್ತರು ಕಾಶಿಯ ಪಕ್ಕದಲ್ಲಿನ ಹಳ್ಳಿಯಲ್ಲಿ ಬಡಗಿಗಳ ಮನೆಯಲ್ಲಿ ತಂಗಿದ್ದರು. ಆ ಮನೆಯಲ್ಲಿ ವೃದ್ಧ ಬಡಗಿಯವನು ಮರವನ್ನು ಕೊಯ್ಯುತ್ತಿದ್ದನು. ಆತನಿಗೆ ತಲೆಯಲ್ಲಿ ಕೂದಲು ಇಲ್ಲದೆ ಬೊಕ್ಕತಲೆಯವನಾಗಿದ್ದನು. ಆತನ ತಲೆಯ ಮೇಲೆ ಸೊಳ್ಳೆಯೊಂದು ಹಾರುತ್ತ ಬಂದು ಬಂದು ಕೊಂಡಿಯಿಂದ ಚುಚ್ಚುತ್ತಿತ್ತು. ಆತನು ಹತ್ತಿರದಲ್ಲಿದ್ದ ಮಗನನ್ನು ಸೊಳ್ಳೆಯನ್ನು ಹೊಡೆದು ಓಡಿಸು ಎಂದು ಆಜ್ಞಾಪಿಸಿದನು. ಪಿತೃವಾಕ್ಯ ಪಾಲನೆಗಾಗಿ ಆ ಮಗನು ತಂದೆಯ ಹಿಂದೆ ನಿಂತು ಓಡಿಸಲು ಮುಂದಾದ. ಅದು ಪುನಃ ತಪ್ಪಿಸಿಕೊಂಡು ತಲೆಯ ಬಳಿ ಕುಳಿತು ಪುನಃ ಕಚ್ಚಿತು. ಇದರಿಂದ ಕ್ರೋಧಗೊಂಡ ಮಗನು ಕೊಡಲಿಯನ್ನು ಎತ್ತಿಕೊಂಡು ಸೊಳ್ಳೆಯನ್ನು ಒಡೆಯಲೆಂದು ಜೋರಾಗಿ ಬೀಸಿ ಒಡೆದ. ಆ ಏಟಿಗೆ ವೃದ್ಧ ತಂದೆಯ ತಲೆಯನ್ನೇ ಎರಡು ಹೋಳು ಮಾಡಿಬಿಟ್ಟನು. ಅಲ್ಲಿ ಶೋಕ ಪ್ರಲಾಪಗಳು ಉಂಟಾಯಿತು.
ಅದನ್ನು ಗಮನಿಸಿದ ಬೋಧಿಸತ್ವರು ಹೀಗೆ ಯೋಚಿಸಿದರು: ಬುದ್ಧಿವಂತನಾದ ಶತ್ರುವು, ಮೂರ್ಖ ಮಿತ್ರನಿಗಿಂತ ಸಾವಿರ ಪಾಲು ಮೇಲು. ಆತನು ಹೀಗೆ ಪ್ರಾಣಾಪಾಯ ತರುವುದಿಲ್ಲ. ಸಹಾಯ ಮಾಡುವ ಮನಸ್ಸಿದ್ದರೆ ಸಾಲದು, ವಿವೇಕಿಯಾಗಿರಬೇಕು, ಇಲ್ಲದಿದ್ದರೆ ಹೀಗೆ ಸಹಾಯದ ಬದಲು ಅನರ್ಥ ಅಪಾಯಗಳೇ ಸಂಭವಿಸುವುದು.


No comments:

Post a Comment

ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು....