Monday, 16 December 2019

ಪುಣ್ಯದಿಂದ ಸಿಗುವ 32 ಮಹಾಪುರುಷ ಲಕ್ಷಣಗಳು

 ಪುಣ್ಯದಿಂದ ಸಿಗುವ 32 ಮಹಾಪುರುಷ ಲಕ್ಷಣಗಳು

ಬೋಧಿಸತ್ವರು ತಮ್ಮ ಹಿಂದಿನ ಜನ್ಮದಲ್ಲಿ ಯತೇಚ್ಛ ದಾನ, ಶೀಲ ಪರಿಪಾಲನೆ, ಮೈತ್ರಿ, ಉಪಸೋತ ಇತ್ಯಾದಿ ಪುಣ್ಯಗಳಿಂದಾಗಿ ಈ ಬಗೆಯ ಮಹಾ ಪುಣ್ಯಗಳಿಂದಾಗಿ, ದಿವ್ಯವಾದ 32 ಮಹಾಪುರುಷ ಲಕ್ಷಣಗಳಿಂದ ಕೂಡಿದ ಶರೀರವನ್ನು ಪಡೆದರು. ಅದರ ಕುರಿತಾಗಿ ಭಗವಾನರು ಹೀಗೆ ಹೇಳಿದ್ದಾರೆ. ಭಿಕ್ಷುಗಳೇ, ಮಹಾಪುರುಷನಾದವನಿಗೆ 32 ಮಹಾಪುರುಷ ಲಕ್ಷಣಗಳಿರುತ್ತವೆ. ಇಂತಹ ಲಕ್ಷಣಗಳಿರುವವನು ಎರಡರಲ್ಲಿ ಒಂದಾಗುತ್ತಾನೆ. ಆತನು ಗೃಹಸ್ಥನಾಗಿಯೇ ಮನೆಯಲ್ಲೇ ಉಳಿದರೆ ಧಾಮರ್ಿಕನು ಧರ್ಮರಾಜನು ಆಗಿರುವ ಆತನು ನಾಲ್ಕು ದಿಕ್ಕುಗಳಲ್ಲಿ ಹಬ್ಬಿರುವ ಭೂಮಿಯನ್ನು ಹಿಂಸಾರಹಿತವಾಗಿಯೇ ಜಯಿಸುತ್ತಾನೆ. ದೇಶವನ್ನು ರಕ್ಷಿಸುವವನು, ಸಪ್ತರತ್ನಗಳನ್ನು ಪಡೆದಿರುವ ಚಕ್ರವತರ್ಿ ಆಗುತ್ತಾನೆ. ಆ ಸಪ್ತರತ್ನಗಳೆಂದರೆ ಚಕ್ರರತ್ನ, ಹಸ್ತಿರತ್ನ, ಅಶ್ವರತ್ನ, ಮಣಿರತ್ನ, ಸ್ತ್ರೀರತ್ನ ಗೃಹಪತಿರತ್ನ ಮತ್ತು ನಾಯಕರತ್ನ. ಹಾಗೂ ಶೂರರು ಪರಾಕ್ರಮಿಗಳು ಆದ ಸಹಸ್ರಕ್ಕೂ ಮೀರಿದ ಪುತ್ರರು ಆತನಿಗೆ ಇರುತ್ತಾರೆ. ದಂಡಶಸ್ತ್ರಗಳಿಲ್ಲದೆಯೇ ಕೇವಲ ಧಮ್ಮದಿಂದಲೇ ಪೃಥ್ವಿಯನ್ನು ಜಯಿಸಿ ಚಕ್ರವತರ್ಿಯಾಗಿ ಆತನು ವಿರಾಜಿಸುತ್ತಾನೆ.
ಹಾಗಿಲ್ಲದೆ ಆತನೇನಾದರೂ ಮನೆಯನ್ನು ತೊರೆದು ಪಬ್ಬಜಿತನಾದರೆ ಅರಹಂತರು, ಸಮ್ಮಾಸಂಬುದ್ಧರು ಆಗಿ ಲೋಕದಲ್ಲಿ ಅಜ್ಞಾನದ ಅಂಧಕಾರವನ್ನು ದೂರಮಾಡುತ್ತಾನೆ. ಇವೆರಡು ಸಂಭವನಿಯತೆಯೇ ಹೊರತು ಬೇರ್ಯಾವುದೂ ಆಗುವುದಿಲ್ಲ.

32 ಮಹಾಪುರುಷ ಬುದ್ಧರ ಲಕ್ಷಣಗಳು 

1. ಮಹಾಪುರುಷರ ಪಾದವು ಒಂದೇ ಸಮವಾಗಿರುತ್ತದೆ. ಕಾಲನ್ನು ನೆಲದಲ್ಲಿಟ್ಟಾಗ ಸಂದು ಬಿಡದ ಪಾದವು ಇರುತ್ತದೆ.
2. ಮಹಾಪುರುಷರ ಅಂಗಾಲಿನಲ್ಲಿ ಸಾವಿರ ಅರೆಗಳು, ಅವಕ್ಕೆ ಹೊಂದುವಂತಹ ನೇಮಿ ನಾಭಿಗಳಿಂದ ಇರುವ ಎಲ್ಲಾರೀತಿಯಲ್ಲಿ ಪರಿಪೂರ್ಣವಾದ ಚಕ್ರವಿರುತ್ತದೆ.
3. ಮಹಾಪುರುಷರು ಚಾಚಿದ ಹಿಮ್ಮಡಿ ಪಡೆದಿರುತ್ತಾರೆ.
4. ಮಹಾ ಪುರುಷರ ಕೈಬೆರಳುಗಳಾಗಲಿ ಅಥವಾ ಕಾಲ್ಬೆರಳುಗಳಾಗಲಿ ಸಾಮಾನ್ಯರಿಗಿಂತ ಉದ್ದವಾಗಿರುತ್ತವೆ.
5. ಮಹಾಪುರುಷರ ಹಸ್ತಗಳಾಗಲಿ ಅಥವಾ ಪಾದಗಳಾಗಿ ಅತ್ಯಂತ ಮೃದು ಮತ್ತು ಕೋಮಲವಾಗಿರುತ್ತವೆ.
6. ಮಹಾಪುರುಷರ ಹಸ್ತಗಳಾಗಲಿ ಅಥವಾ ಪಾದಗಳಲ್ಲಿ ಆಗಲಿ ಅವರಿಗೆ ಬಲೆಯಂತಹ ರೇಖಾ ಚಿತ್ರವಿರುತ್ತದೆ.
7. ಮಹಾಪುರುಷರ ಹಿಮ್ಮಡಿಯು ದುಂಡಾದ ಶಿಲಾಕೃತಿಯಲ್ಲಿರುತ್ತದೆ.
(ಈ ಬಗೆಯ ಹಿಮ್ಮಡಿಯಿಂದಾಗಿ ದೀರ್ಘಕಾಲ ಪದ್ಮಾಸನದಲ್ಲಿ ಸುಖವಾಗಿರಬಹುದು).
8. ಮಹಾಪುರುಷರ ಕಾಲುಗಳು ಜಿಂಕೆಯ ಕಾಲುಗಳ ರೀತಿ ಆಕಾರದಲ್ಲಿದ್ದು, ಅತ್ಯಂತ ಸುಂದರವಾಗಿ ಕಾಣುವುದು.
9. ಮಹಾಪುರುಷರು ನಿಂತಾಗ, ಅವರು ಬಾಗದೆಯೇ ಇರುವಾಗಲು ಅವರ ಕೈಗಳು ಮಂಡಿಯನ್ನು ಮುಟ್ಟುವಷ್ಟು ಉದ್ದವಾಗಿರುತ್ತದೆ.
10. ಮಹಾಪುರುಷರ ಗುಹ್ಯವಸ್ತುವು ಕೋಶದಿಂದ ಆವೃತವಾಗಿರುತ್ತದೆ.
11. ಮಹಾಪುರುಷರ ಮೈಬಣ್ಣವು ಸುವರ್ಣ ವರ್ಣದ್ದಾಗಿರುತ್ತದೆ.
12. ಮಹಾಪುರುಷರ ಮೈ ಚರ್ಮವು ಅತ್ಯಂತ ಮೃದುವಾಗಿದ್ದು, ಅದರಿಂದಾಗಿ ಯಾವುದೇ ದೂಳು ಶರೀರಕ್ಕೆ ಅಂಟುವುದಿಲ್ಲ.
13. ಮಹಾಪುರುಷರ ಚರ್ಮದ ಮೇಲಿನ ರೋಮರಂಧ್ರಗಳಲ್ಲಿ ಒಂದೊಂದೇ ಕೂದಲು ಇರುತ್ತದೆ.
14. ಮಹಾಪುರುಷರ ಮೈಕೂದಲುಗಳು ಕಡು ನೀಲಿ ವರ್ಣವನ್ನು ಹೊಂದಿದ್ದು ಮೇಲ್ಮುಖವಾಗಿದ್ದು, ಗುಂಗುರು ರೀತಿಯಲ್ಲಿ ಬಲಗಡೆಗೆ ತಿರುಗಿರುತ್ತದೆ.
15. ಮಹಾಪುರುಷರ ದೇಹವು ಬ್ರಹ್ಮಲೋಕದವರಂತೆ ನೆಟ್ಟಗೆ ಇರುತ್ತದೆ. (ಜಾಗ್ರತೆಯಿಂದ ಗಂಭೀರವಾಗಿರುತ್ತದೆ, ಹಿಂದಕ್ಕೆ ಮುಂದಕ್ಕೆ ಬಾಗದೆ ನೇರವಾಗಿರುತ್ತದೆ.)
16. ಮಹಾಪುರುಷರ ದೇಹದಲ್ಲಿ ಏಳು ಉಬ್ಬಿರುತ್ತದೆ (ಅಂದರೆ ಸಮಪ್ರಮಾಣದ ಮಾಂಸಾಕೃತಿಯಲ್ಲಿದ್ದು ಬೇರೆಯವರಿಗಿಂತ ಭಿನ್ನವಾಗಿ ಸುಂದರ ಸುಲಕ್ಷಣದಿಂದಿರುತ್ತದೆ)
17. ಮಹಾಪುರುಷರ ದೇಹವು ಮುಂಭಾಗದ ಅರ್ಧಭಾಗವು ಸಿಂಹದಂತಿರುತ್ತದೆ.
18. ಮಹಾಪುರುಷರ ಭುಜಗಳ ನಡುವೆ ಯಾವ ತಗ್ಗು ಇರುವುದಿಲ್ಲ.
19. ಮಹಾಪುರುಷರ ದೇಹದ ಅಂಗಾಗಗಳು ಆಲದ ಮರದಂತೆ ಸಮ ಪ್ರಮಾಣ ದಲ್ಲಿರುತ್ತವೆ. ಅಂದರೆ ಅವರ ದೇಹದ ಉದ್ದವು, ಎರಡು ತೋಳುಗಳನ್ನು ಚಾಚಿದಾಗ ಬರುವ ಉದ್ದದಷ್ಟೇ ಇರುತ್ತದೆ.
20. ಮಹಾಪುರುಷರ ಎದೆಯು ಸಮವಾಗಿ, ಸುಂದರವಾಗಿ, ವಿಶಾಲವಾಗಿ ಯೋಗ್ಯ ಪ್ರಮಾಣದಲ್ಲಿರುತ್ತದೆ.
21. ಮಹಾಪುರುಷರ ರಸಸ್ವಾದನೆಯು (ಅಭಿರುಚಿಯು) ತೀಕ್ಷ್ಣವಾಗಿರುತ್ತದೆ.
22. ಮಹಾಪುರುಷರ ದವಡೆಯು ಸಿಂಹದ ದವಡೆಯಂತಿರುತ್ತದೆ.
23. ಮಹಾಪುರುಷರು 40 ಹಲ್ಲುಗಳನ್ನು ಹೊಂದಿರುತ್ತಾರೆ.
24. ಮಹಾಪುರುಷರ ಹಲ್ಲಿನ ಸಾಲು ಸಮಮಟ್ಟದಲ್ಲಿರುತ್ತದೆ.
25. ಮಹಾಪುರುಷರ ಹಲ್ಲುಗಳ ನಡುವೆ ಸಂದುಗಳಿರುವುದಿಲ್ಲ, ಎಡೆಬಿಡದೆ ಕೂಡಿಕೊಂಡಿರುತ್ತವೆ.
26. ಮಹಾಪುರುಷರ ಕಣ್ಣುಗಳಾಗಲಿ, ಹಲ್ಲುಗಳಾಗಲಿ, ಶ್ವೇತವರ್ಣದಿಂದಿದ್ದು ಸದಾ ಹೊಳೆಯುತ್ತಿರುತ್ತವೆ.
27. ಮಹಾಪುರುಷರ ನಾಲಗೆಯು ಉದ್ದವಾಗಿದ್ದು, ಅದನ್ನು ಹುಬ್ಬುಗಳಿಗೂ, ಕಿವಿಗಳಿಗೂ ಸ್ಪಶರ್ಿಸಬಹುದಾಗಿದೆ.
28. ಮಹಾಪುರುಷರಿಗೆ ದಿವ್ಯವಾದ ಧ್ವನಿಯಿದ್ದು, ಆ ಧ್ವನಿಯು ಕಾರವಿಕ-ಪಕ್ಷಿಗೆ ಹೋಲುತ್ತದೆ. ಆ ಧ್ವನಿಯು ಎಂಟು ವಿಶೇಷತೆಯಿಂದ ಕೂಡಿರುತ್ತದೆ.
29. ಮಹಾಪುರುಷರಿಗೆ ಪರಮ ದಿವ್ಯವಾದ ಕಡುನೀಲಿ ವರ್ಣದ ಕಣ್ಣುಗಳಿದ್ದು (ವಿಶಾಲವಾಗಿಯು, ಸುಂದರವಾಗಿಯೂ ಕಮಲಾಕೃತಿಯಿಂದ ಇರುತ್ತದೆ.)
30. ಮಹಾಪುರುಷರಿಗೆ ಇರುವಂತಹ ಅಂತಹ ಕಣ್ಣುಗಳಿಗೆ ರೆಪ್ಪೆಯು ಎಳೆ ಕರುವಿ (ಹಸುವಿನ) ನಂತೆ ಉದ್ದವಾಗಿಯೂ ಸುಂದರವಾಗಿರುತ್ತದೆ.
31. ಮಹಾಪುರುಷರ ಎರಡು ಹುಬ್ಬುಗಳ ನಡುವೆ ಶ್ವೇತವರ್ಣದ ಒಂದೇ ಕೂದಲು ಇದ್ದು ಅದು ಹತ್ತಿಯಂತೆ ಮೃದುವಾಗಿ ಸುಂದರವಾಗಿರುತ್ತದೆ.
32. ಮಹಾಪುರುಷರ ಶಿರವು ರಾಜನಿಗೆ ಮಾಡಿಸಿದ ಕಿರೀಟದಂತಹ ಆಕೃತಿಯಲ್ಲಿರುತ್ತದೆ. ಇವೇ ಅಂತಿಮ ಜನ್ಮದ ಬೋಧಿಸತ್ವ (ಬುದ್ಧರು) ಪಡೆಯುವ 32 ಮಹಾಪುರುಷ ಲಕ್ಷಣಗಳಾಗಿವೆ.

No comments:

Post a Comment

ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು....