ಬೋಧಿಸತ್ವರ ದಾನ ಹೃದಯ ವಿಕಸನೆ-ಚಿಂತನೆ
ಜನರಿಗೆ ನಾನಾ ಸ್ವತ್ತುಗಳಿರುತ್ತವೆ. ಹೇಳುವುದಾದರೆ ಹೊಲಗದ್ದೆಗಳು, ಭವನಗಳು, ಐಶ್ವರ್ಯಗಳಾದ ಹಣ, ಚಿನ್ನ, ಆಭರಣ, ಇತ್ಯಾದಿಗಳು. ಪ್ರಾಣಿಗಳಾದ ಕುರಿ, ಕೋಳಿ, ಕುದುರೆ ಇತ್ಯಾದಿಗಳು, ವಾಹನಗಳು, ಅಧಿಕಾರ, ಕೀತರ್ಿ, ಪತ್ನಿ, ಮಕ್ಕಳು, ಇತ್ಯಾದಿ. ಅವರು ಇವಕ್ಕೆಲ್ಲಾ ಪ್ರಬಲವಾಗಿ ಅಂಟಿರುತ್ತಾರೆ. ಆದರೆ ಇವೆಲ್ಲಾ ಸ್ವತ್ತುಗಳು ಕೆಲವರಿಗೆ ಸಿಗುವುದೇ ಇಲ್ಲ. ಅದಕ್ಕಾಗಿ ಕೊರಗಿ ದುಃಖಿಸುತ್ತರೆ. ಕೆಲವರಿಗೆ ಇದ್ದರೂ ಎಂದೂ ವಿಯೋಗವಾಗುವುದೋ ಎಂದು ಹೆದರುತ್ತಾರೆ. ಈ ಸ್ವತ್ತುಗಳಿಗಾಗಿ ಶತ್ರುತ್ವ ಕಟ್ಟಿಕೊಳ್ಳುತ್ತಾರೆ. ಇವುಗಳ ರಕ್ಷಣೆ, ಶಸ್ತ್ರಗಳ ಬಳಕೆ ಮಾಡುತ್ತಾರೆ. ಸಮಾಜದಲ್ಲೇ ಅನೈಕ್ಯತೆ ಉಂಟುಮಾಡುತ್ತಾರೆ. ಆದರೂ ಸಹಾ ಇವುಗಳಲ್ಲಿ ಯಾವುದೂ ಶಾಶ್ವತವಲ್ಲ. ಇವುಗಳು ನಾಶವಾದಾಗ, ವಿಯೋಗವಾದಾಗ, ನಷ್ಟವಾದಾಗ, ದೂರಾದಾಗ ಅವರು ದುಃಖಿಸುತ್ತಾರೆ. ಅವರ ಮನಸ್ಸು ಇವುಗಳಿಗಾಗಿ ಪ್ರಬಲವಾಗಿ ಅಂಟಿ ನನ್ನದು ಎಂಬ ಸ್ವಾರ್ಥ ಬೆಳೆದುಬಿಟ್ಟಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಯಾರಾದರೂ ಬಂದಾಗ ಅವರ ಮೇಲೆ ದ್ವೇಷ ಉಂಟಾಗುತ್ತದೆ. ಇವು ಎಲ್ಲಿ, ಯಾವಾಗ, ಹೇಗಾದರೂ ನಷ್ಟವಾಗುತ್ತದೋ ಎಂದು ಭೀತಿ, ಚಿಂತೆಗಳು ಇರುತ್ತದೆ. ಈ ಬಗೆಯ ಲೋಭದಿಂದ ಒಬ್ಬನು ದುರ್ಗತಿಯಲ್ಲಿ ಹುಟ್ಟುವನು.
ಆದರೆ ಇವುಗಳಿಗೆ ಅಂಟದೆ ಇದ್ದಾಗ ಶಾಂತಿ ಸಿಗುತ್ತದೆ. ಸುರಕ್ಷತೆಯ ಭಾವ ಉಂಟಾಗುತ್ತದೆ. ಆದ್ದರಿಂದಾಗಿ ಜ್ಞಾನಿಯೊಬ್ಬನು ಇವುಗಳಲ್ಲಿ ತ್ಯಾಗ ಮನೋಭಾವ ತಾಳಲಿ.
- ಈ ಜಗತ್ತಿನಲ್ಲಿರುವವರು ಎಲ್ಲರೂ ಸಹೋದರ, ಸಹೋದರಿಯರೇ ಆಗಿದ್ದಾರೆ, ಮಿತ್ರರೇ ಆಗಿದ್ದಾರೆ. ಇವರೆಲ್ಲಾ ಒಂದು ಜನ್ಮದಲ್ಲಿ ತಂದೆ-ತಾಯಿಗಳೇ ಆಗಿದ್ದಾರೆ. ಆದ್ದರಿಂದಾಗಿ ಎಲ್ಲರಿಗಾಗಿ ದಾನ ಮಾಡುವುದು ಒಳ್ಳೆಯದೇ ಆಗಿದೆ.
- ಪ್ರತಿಯೊಬ್ಬರೂ ಹಿಂದಿನ ಯಾವುದಾದರೂ ಜನ್ಮದಲ್ಲಿ ಸಹಾಯ ಮಾಡಿಯೇ ಇದ್ದಾರೆ. ಅವರಿಗೆ ಪ್ರತಿಯಾಗಿ ಕೃತಜ್ಞತಾಪೂರ್ವಕವಾಗಿ ದಾನ ಸಹಾಯ ಮಾಡುವಂತಾಗಲಿ.
- ಯಾವಾಗ ನಾವು ಸಾಯುವೆವೋ ಆಗ ಎಲ್ಲವನ್ನು ತೊರೆಯಬೇಕಾಗುತ್ತದೆ. ಯಾರೂ ಸಹಾ ಯಾವ ಸ್ವತ್ತನ್ನೂ ತೆಗೆದುಕೊಂಡು ಹೋಗಲಾಗುವುದಿಲ್ಲ. ಆದರೆ ದಾನಫಲವನ್ನು ನಾವು ತೆಗೆದುಕೊಂಡು ಹೋಗಬಹುದು. ಆದ್ದರಿಂದಾಗಿ ನಾನು ದಾನ ಮಾಡಲಿ.
- ಜೀವನವು ಯಾವುದೇ ಕ್ಷಣದಲ್ಲಿ ಅಂತ್ಯವಾಗಬಹುದು. ಹೀಗಾಗಿ ನಾನು ಯಾರೂ ಕೇಳದೆಯೇ ಸಹಾಯ, ದಾನ ಮಾಡಬೇಕಾಗಿದೆ. ಇನ್ನೂ ಕೇಳಿದಾಗ ಖಂಡಿತ ದುಪ್ಪಟ್ಟು ಸಹಾಯ ದಾನ ಮಾಡುವಂತಾಗಲಿ.
- ಯಾಚಕರೇ ಇಲ್ಲದಿದ್ದಾಗ ದಾನ ಎಲ್ಲಿ? ಹೇಗೆ? ಆಗ ಪುಣ್ಯ ಲಭಿಸುವುದು ಎಂತು? ಆದ್ದರಿಂದ ನಾನು ದಾನ ಮಾಡುವಂತಾಗಲಿ.
- ನಿಜವಾಗಿಯೂ ನಮಗೆ ಹೇರಳವಾಗಿ ದೊರೆಯುವುದು ಪರರಿಗಾಗಿ ದಾನ ಮಾಡುವುದಕ್ಕಾಗಿಯೇ ಆಗಿದೆ.
- ಪರರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ದಾನ ನೀಡಬೇಕಾಗಿದೆ. ಕೇಳಿದಾಗಲಂತೂ ಖಂಡಿತ ದಾನ ಮಾಡಲಿ.
- ಐಶ್ವರ್ಯವಿದ್ದಾಗ ಯಾಚಕರು ಬರುವರು, ಐಶ್ವರ್ಯ ಇಲ್ಲದಿದ್ದಾಗ ನನ್ನ ಶರೀರವೇ ಇದೆಯಲ್ಲ, ನಾನು ನನ್ನ ಭಾಗವನ್ನೇ ದಾನ ನೀಡುವಂತಾಗಲಿ.
- ಓಹ್! ಒಬ್ಬನು ಯಾಚಿಸುತ್ತಿದ್ದಾನಲ್ಲ, ದಾನಕ್ಕೆ ಅವಕಾಶ ಸಿಕ್ಕಿತಲ್ಲ ಎಂದು ಆನಂದಿಸಲಿ.
- ಒಳಿತಿಗೆ ಪ್ರತಿಯಾಗಿ ಒಳ್ಳೆಯದು ಆಗುವುದು. ದಾನಕ್ಕೆ ಪ್ರತಿಯಾಗಿ ಸುಖವೇ ಸಿಗುವುದು. ಆದ್ದರಿಂದಾಗಿ ದಾನ ಮಾಡಲಿ.
- ದಾನದಿಂದ ಸ್ನೇಹಿತರು ದೊರಕುವರು. ಬಾಂಧವ್ಯ ಬಲಿಷ್ಠವಾಗುವುದು. ಆದ್ದರಿಂದ ನಾನು ದಾನ ನೀಡುವಂತಾಗಲಿ.
- ಶತ್ರುವಿಗೂ ದಾನ ನೀಡಿದರೆ ಮಿತ್ರನಾಗುವನು. ಶತ್ರುತ್ವ ನಾಶಕವಾದ ದಾನವನ್ನು ನಾನು ನೀಡುವಂತಾಗಲಿ.
- ಒಬ್ಬನು ಮೊದಲು ತನ್ನ ಹಿತವನ್ನು ಮಾಡಿಕೊಳ್ಳಲಿ.
- ನಂತರ ತಂದೆ-ತಾಯಿಗಳಿಗೆ ಹಿತಮಾಡಲಿ
- ನಂತರ ಪತ್ನಿ-ಪುತ್ರರಿಗೆ ಹಿತಮಾಡಲಿ
- ನಂತರ ಮಿತ್ರರಿಗೆ ಹಿತಮಾಡಲಿ
- ನಂತರ ಬಂಧು-ಬಾಂಧವರಿಗೆ ಹಿತಮಾಡಲಿ
- ನಂತರ ಯಾಚಕರಿಗೆ ಹಿತಮಾಡಲಿ
- ನಂತರ ಶತ್ರುಗಳಿಗೆ ಹಿತಮಾಡಲಿ.
- ಹೀಗಿದ್ದು ದಾನವನ್ನು ಸರ್ವವ್ಯಾಪಿಗೊಳಿಸಲಿ.
- ಮರದ ಯಾವುದೇ ಭಾಗಗಳನ್ನು ಕಿತ್ತುಕೊಂಡರು, ಕತ್ತರಿಸಿದರೂ ಅದು ನನ್ನದು ಹೋಗುತ್ತಿದೆ, ನನ್ನದನ್ನು ಕಿತ್ತುಕೊಳ್ಳುತ್ತಿದ್ದಾರೆ, ಕತ್ತರಿಸುತ್ತಿದ್ದಾರೆ ಎಂದು ಭಾವಿಸದು. ಹಾಗೆಯೇ ನಿಮ್ಮ ಶರೀರದ ಭಾಗಗಳನ್ನು ನೀವು ನಿಲರ್ಿಪ್ತರಾಗಿ ದಾನ ಮಾಡಿ.
- ಇದು ನನ್ನದೆಂಬ ಭಾವ ಬೇಡ, ನನ್ನದು ಎಂಬುದರಿಂದ ದುಃಖವಿದೆ. ಆದ್ದರಿಂದ ನನ್ನದೆಂಬುದನ್ನು ಯಾರಿಗೆ ಬೇಕೋ ತೆಗೆದುಕೊಂಡು ಹೋಗಲಿ.
- ಹೀಗೆ ವಿವಿಧರೀತಿಯಲ್ಲಿ ಬೋಧಿಸತ್ವರು ಚಿಂತನೆ ಮಾಡಿ ದಾನ ಹೃದಯವನ್ನು ವಿಕಾಸಗೊಳಿಸುತ್ತಾರೆ. ಹೀಗೆ ಚಿಂತನೆ ಮಾಡಿದಾಗ ಅವರ ಚಿತ್ತ ಶುದ್ಧಿಯಾಗುತ್ತದೆ, ನನ್ನದು ಎಂಬ ಸ್ವಾರ್ಥದಿಂದ ಬಿಡುಗಡೆ ಹೊಂದುತ್ತದೆ. ಅದರ ಮನೋಭಾವವು ಹೀಗೆಯೇ ದೃಢವಾಗುತ್ತದೆ. ಅವರ ಮಾತು ಮತ್ತು ಕೃತಿಯಲ್ಲಿ ದಾನವು ಹಾಸುಹೊಕ್ಕಿರುತ್ತದೆ. ಅವರು ದಾನದಲ್ಲಿ ಸಹಾ ಮುಂದಿರುತ್ತಾರೆ.

No comments:
Post a Comment