ಬೋಧಿಸತ್ವರ ಪ್ರಜ್ಞಾ-ಕರುಣಾ ಸಂಗಮ
ಭೋಧಿಸತ್ವರು :
- ಪ್ರಜ್ಞಾದಿಂದಾಗಿ ಬೋಧಿಸತ್ವ ತನ್ನನ್ನು ಪರಿಪೂರ್ಣಗೊಳಿಸುತ್ತಾನೆ. ಆದರೆ ಕರುಣೆಯಿಂದಾಗಿ ಬುದ್ಧರ ಕಾರ್ಯವನ್ನು ಮಾಡುವ ಸಾಮಥ್ರ್ಯ ಪಡೆಯುತ್ತಾನೆ.
- ಪ್ರಜ್ಞಾದಿಂದಾಗಿ ಆತನು ಸಂಸಾರವನ್ನು ದಾಟುತ್ತಾನೆ. ಆದರೆ ಕರುಣೆಯಿಂದಾಗಿ ಆತನು ಪರರನ್ನು ಸಂಸಾರದಿಂದ ದಾಟಿಸುತ್ತಾನೆ.
- ಪ್ರಜ್ಞಾದಿಂದಾಗಿ ಪರರ ದುಃಖವನ್ನು ಅರ್ಥಮಾಡಿಕೊಳ್ಳುತ್ತಾನೆ. ಆದರೆ ಕರುಣೆಯಿಂದಾಗಿ ಪರರ ದುಃಖ ಹೋಗಲಾಡಿಸಲು ಯತ್ನಿಸುತ್ತಾನೆ.
- ಪ್ರಜ್ಞಾದಿಂದಾಗಿ ದುಃಖದಿಂದ ವಿಮುಕ್ತನಾಗುತ್ತಾನೆ. ಆದರೆ ಕರುಣೆಯಿಂದಾಗಿ ಪರರಿಗಾಗಿ ದುಃಖವನ್ನು ಸ್ವೀಕರಿಸುತ್ತಾನೆ.
- ಪ್ರಜ್ಞಾದಿಂದಾಗಿ ನಿಬ್ಬಾಣವನ್ನು ಆಕಾಂಕ್ಷಿಸುತ್ತಾರೆ, ಆದರೆ ಕರುಣೆಯಿಂದಾಗಿ ಪರರಿಗಾಗಿ ಸಂಸಾರದಲ್ಲೇ ಇರುತ್ತಾರೆ.
- ಕರುಣೆಯಿಂದಾಗಿ ಸಂಸಾರದಲ್ಲೇ ಇದ್ದರೂ ಪ್ರಜ್ಞಾದಿಂದಾಗಿ ಅವುಗಳಲ್ಲಿ ಆನಂದಿಸಲಾರರು.
- ಪ್ರಜ್ಞಾದಿಂದ ಎಲ್ಲಾ ಅಂಟುವಿಕೆಯಿಂದ ಪಾರಾದರೂ ಕರುಣೆಯಿಂದಾಗಿ ಪರಹಿತದಲ್ಲೇ ರಮಿಸುವರು, ಕರುಣೆಯಿಂದಾಗಿ ಸರ್ವಜೀವಿಗಳ ಮೇಲೆ ದಯೆಯಿದ್ದರೂ ಅದೇ ವೇಳೆಯಲ್ಲಿ ಪ್ರಜ್ಞಾದಿಂದಾಗಿ ಸರ್ವರಲ್ಲೂ ಅಂಟದೆಯೂ ಇರುವರು.
- ಪ್ರಜ್ಞಾದಿಂದಾಗಿ ನಾನೇ ಮಾಡುವವನು, ನನ್ನಿಂದಲೇ ಆಯಿತು ಎಂಬುದರಿಂದ ಬಿಡುಗಡೆ ಹೊಂದಿದರೂ, ಕರುಣೆಯಿಂದಾಗಿ ಸೋಮಾರಿತನ ಮತ್ತು ಚಿಂತೆಯಿಂದ ಮುಕ್ತರಾಗುತ್ತಾರೆ.
- ಪ್ರಜ್ಞಾ ಮತ್ತು ಕರುಣೆಯಿಂದ ಸರ್ವರ ರಕ್ಷಕರಾಗುತ್ತಾರೆ.
- ಪ್ರಜ್ಞಾ ಮತ್ತು ಕರುಣೆಯಿಂದ ಸರ್ವರ ಉನ್ನತಿಗೆ ಶ್ರಮಿಸುತ್ತಾರೆ.
- ಪ್ರಜ್ಞಾ ಮತ್ತು ಕರುಣೆಯಿಂದ ಸರ್ವರಿಗೆ ಅಭಯ ನೀಡುವವರಾಗುತ್ತಾರೆ.
- ಪ್ರಜ್ಞಾ ಮತ್ತು ಕರುಣೆಯಿಂದ ಕೃತಜ್ಞತೆಯಿಂದ ಕೂಡಿರುತ್ತಾರೆ.
- ಪ್ರಜ್ಞಾ ಮತ್ತು ಕರುಣೆಯಿಂದ ತೀವ್ರ ಲಾಲಸೆ, ಮೋಹ, ಸ್ವಾರ್ಥ, ದ್ವೇಷದಿಂದ ಮುಕ್ತರಾಗುತ್ತಾರೆ.
- ಪ್ರಜ್ಞಾ ಮತ್ತು ಕರುಣೆಯಿಂದ ಎಲ್ಲಾ ಜ್ಞಾನಗಳನ್ನು, ಬಲಗಳನ್ನು, ಫಲಗಳನ್ನು ಪಡೆದು ಪಾರಮಿತಗಳನ್ನು ಪರಿಪೂರ್ಣಗೊಳಿಸುತ್ತಾರೆ.

No comments:
Post a Comment