Monday, 16 December 2019

ಬೋಧಿಸತ್ವನಾಗಲು ಬೇಕಾದ ಎಂಟು ಅರ್ಹತೆಗಳು:

  ಬೋಧಿಸತ್ವನಾಗಲು ಬೇಕಾದ ಎಂಟು ಅರ್ಹತೆಗಳು:

1. ಮನುಸ್ಸತ್ತ : ಆತನು ಮಾನವನಾಗಿರಬೇಕು.


2. ಲಿಂಗಸಂಪತ್ತಿ : ಆತನು ಪುರುಷನಾಗಿರಬೇಕು, ಏಕೆಂದರೆ ಸ್ತ್ರೀಯರು ಅರಹಂತರು ಆಗಬಹುದು. ಆದರೆ ಬುದ್ಧರಾಗಲಿ, ಬೋಧಿಸತ್ವರಾಗಲಿ ಆಗಲಾರರು. ಅದಕ್ಕೆ ಸ್ತ್ರೀಯ ದೇಹವೇ ದೊಡ್ಡ ಅಡ್ಡಿಯಾಗುವುದು. ಅದಕ್ಕಾಗಿ ಮೊದಲು ಪುರುಷರಾಗಿ ನಂತರ ಬೋಧಿಸತ್ವರಾಗಬೇಕಾಗುತ್ತದೆ.


3. ಹೇತು : ಆತನು ಕುಶಲ ಮೂಲಗಳಾದ ಅಲೋಭ, ಅದ್ವೇಷ ಮತ್ತು ಅಮೋಹಗಳು ಹೆಚ್ಚಾಗಿರಬೇಕು. ಅಂದರೆ ದಾನ, ವೈರಾಗ್ಯ, ಕರುಣೆ ಮತ್ತು ಪ್ರಜ್ಞಾ ಹೆಚ್ಚಾಗಿರಬೇಕು.


4. ಸತ್ತರಾದಸ್ಸನ : ಬುದ್ಧರನ್ನು ಮುಖಾಮುಖಿಯಾಗಿ ದಶರ್ಿಸಿ, ಅವರ ಮುಂದೆ ಬುದ್ಧರಾಗುವ ಹಂಬಲ ವ್ಯಕ್ತಪಡಿಸಬೇಕು. ಆಗ ಬುದ್ಧರು ಇಂತಹ ಕಾಲದಲ್ಲಿ ಈತನು ಬುದ್ಧನಾಗುವನು ಎಂದು ಭವಿಷ್ಯವಾಣಿ ನುಡಿಯುವರು.


5. ಪಬ್ಬಜ್ಜ : ಆತನು ಪಬ್ಬಜ್ಜ ಪಡೆದು ಭಿಕ್ಷುವಾಗಬೇಕು. ಏಕೆಂದರೆ ಇಂದ್ರೀಯ ಭೋಗಿಯು ಬೋಧಿಸತ್ವನಾಗಲಾರ.


6. ಗುಣಸಂಪತ್ತಿ : ಆತನು ಅಷ್ಟ ಸಮಾಪತ್ತಿ ಮತ್ತು ಐದು ಅಭಿಜ್ಞಾ ಪ್ರಾಪ್ತಿಮಾಡಬೇಕು.


7. ಅಧಿಕಾರ : ಬುದ್ಧರಿಗೆ ಪ್ರಾಣ ನೀಡುವಷ್ಟು ಪ್ರಬಲ ಭಕ್ತಿಯಿರಬೇಕು.

8. ಚಂದತಾ : ಪ್ರಬಲ ಇಚ್ಛಾಶಕ್ತಿಯಿಂದ ಕೂಡಿರಬೇಕು, ದೃಢನಿಧರ್ಾರಿಯಾಗಿರಬೇಕು, ಬುದ್ಧತ್ವಕ್ಕಾಗಿ ನರಕದಂತಹ ಸಂಕಷ್ಟಗಳನ್ನು ಎದುರಿಸಲು ಸಿದ್ಧನಾಗಬೇಕು.

ಹೀಗೆ ಈ ಎಂಟು ಅರ್ಹತೆಗಳ ಪ್ರಾಪ್ತಿಯನಂತರ ಅವರು ಪಾರಮಿಗಳನ್ನು ಪರಿಪೂರ್ಣಗೊಳಿಸಲು ಸಿದ್ಧರಾಗುತ್ತಾರೆ. ಪಾರಮಿಗಳಲ್ಲಿ ದಾನವೇ ಮೊದಲು. ಏಕೆಂದರೆ ಸರ್ವಜೀವಿಗಳಿಗೆ ದಾನವು ಸಾಮಾನ್ಯ ಮತ್ತು ಸಾಮಾನ್ಯ ಮಾನವರು ಪಾಲಿಸಲು ಸಾಧ್ಯವಿರುವುದು, ಸುಲಭವಿರುವುದು ಮತ್ತು ಫಲಕಾರಿಯಾಗಿರುವಂತಹುದು.

No comments:

Post a Comment

ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು....