Monday, 16 December 2019

ಪಾರಮಿಗಳು

ಪಾರಮಿಗಳು

ಪಾಳಿಯಲ್ಲಿ ಪಾರಮಿ ಮತ್ತು ಸಂಸ್ಕೃತದಲ್ಲಿ ಪಾರಮಿತವೆಂದು ಹೇಳುತ್ತೇವೆ. ಪಾರಮಿಗಳೆಂದರೆ ಪರಮೋತ್ತರ ಸದ್ಗುಣಗಳಾಗಿವೆ. ಅಂದರೆ ದಾನ, ಶೀಲ, ತ್ಯಾಗ ಮುಂತಾದ ಸದ್ಗುಣಗಳಾಗಿವೆ. ಇವು ಸದಾ ಪ್ರಜ್ಞಾ ಮತ್ತು ಕರುಣೆಯಿಂದ ಜೊತೆಗೂಡಿರುತ್ತದೆ. ಆದರೆ ತೀವ್ರಲಾಲಸೆ, ಅಹಂಕಾರ ಮತ್ತು ಮಿಥ್ಯಾ ದೃಷ್ಟಿಗಳಿಂದ ವಿಮುಕ್ತವಾಗಿರುತ್ತವೆ.
ಇವು ಪರಮ ಅಂದರೆ ಮಹತ್ತರವಾದುದರಿಂದ ಇದಕ್ಕೆ ಪಾರಮಿ ಎನ್ನುತ್ತೇವೆ. ಪರತೀತ ಪರಮೋ ಪರಮ ಶ್ರೇಷ್ಠರಾದ ಬೋಧಿಸತ್ವರು ಪಾಲಿಸುವುದರಿಂದ ಇದಕ್ಕೆ ಪಾರಮಿ ಎನ್ನುತ್ತೇವೆ. ಇಂತಹ ಪರಮ ಸದ್ಗುಣಗಳನ್ನು ಪಾಲಿಸುವುದರಿಂದಲೇ ಅವರು ಪರಮ ಉದಾತ್ತರು ಎಂದೆನಿಸಿಕೊಂಡಿದ್ದಾರೆ.
ಒಮ್ಮೆ ಸಾರಿಪುತ್ರರು ಭಗವಾನರಲ್ಲಿ ಹೀಗೆ ಕೇಳಿಕೊಂಡರು: ಭಗವಾನ್ ಬುದ್ಧತ್ವ ಸಾಧಿಸಲು ಎಷ್ಟು ಸದ್ಗುಣಗಳು ಬೇಕಾಗುತ್ತವೆ?
ಓ ಸಾರಿಪುತ್ತ ಬುದ್ಧತ್ವ ಸಾಧಿಸಲು 10 ಪಾರಮಿಗಳು ಬೇಕಾಗುತ್ತವೆ. ಅವೆಂದರೆ: ದಾನ, ಶೀಲ, ತ್ಯಾಗ, ಪ್ರಜ್ಞಾ, ವೀರ್ಯ, ಕ್ಷಾಂತಿ, ಸತ್ಯ, ಅದಿಷ್ಠಾನ, ಮೆತ್ತ ಮತ್ತು ಉಪೇಕ್ಷಾ.
ಸಾಧಾರಣ ಮಾನವನು ಬುದ್ಧರಾಗಲು ಸಾಧ್ಯವಿಲ್ಲ. ಬೋಧಿಸತ್ವರು ಮಾತ್ರ ಬುದ್ಧರಾಗಬಲ್ಲರು, ಆದರೆ ಸಾಧಾರಣ ಮಾನವನು ಮೊದಲು ಬೋಧಿಸತ್ವನಾಗಿ ನಂತರ ಬುದ್ಧನಾಗಬೇಕಾಗುತ್ತದೆ.
ಬೋಧಿಸತ್ವನಾಗಲು ಬೇಕಾದ ಎಂಟು ಅರ್ಹತೆಗಳು
ಬೋಧಿಸತ್ವನಾಗಲು ಅಪಾರ ಮಹತ್ವಾಕಾಂಕ್ಷೆ ಅವಶ್ಯಕವಾಗಿದೆ. ಈ ದೃಢ ಮಹತ್ವಾಕಾಂಕ್ಷೆಯೇ ಎಂಟು ಗುಣಗಳಿಗೆ ಆಹಾರ ನೀಡುವುದು.
ನಾನು ತಡೆಗಳನ್ನು ದಾಟಿ, ಪರರನ್ನು ಮುಕ್ತನನ್ನಾಗಿಸುವೆ
ನಾನು ಮುಕ್ತನಾಗಿ, ಪರರನ್ನು ಮುಕ್ತನನ್ನಾಗಿಸುವೆ
ನಾನು ಪಳಗಲ್ಪಟ್ಟು, ಪರರನ್ನು ಪಳಗಿಸುವೆ
ನಾನು ಶಾಂತನಾಗಿ, ಪರರನ್ನು ಶಾಂತವಾಗಿಸುವೆ
ನಾನು ಕ್ಷೇಮಸ್ಥಾನ ತಲುಪಿ, ಪರರನ್ನು ಕ್ಷೇಮ ಸ್ಥಾನಕ್ಕೆ ತಲುಪಿಸುವೆ
ನಾನು ನಿಬ್ಬಾಣ ಗಳಿಸಿ, ಪರರನ್ನು ನಿಬ್ಬಾಣ ಪ್ರಾಪ್ತಿಮಾಡಿಸುವೆ.
ನಾನು ಪರಿಶುದ್ಧನಾಗಿ, ಪರರನ್ನು ಪರಿಶುದ್ಧಿಗೊಳಿಸುವೆ.
ನಾನು ಬೋಧಿಪ್ರಾಪ್ತಿ ಮಾಡಿ, ಪರರನ್ನು ಬೋಧಿಪ್ರಾಪ್ತಿ ಮಾಡಿಸುವೆ
ಈ ಬಗೆಯ ಮನೋಭಾವವನ್ನು ಬೋಧಿಸತ್ವರು ಹೊಂದಿರುತ್ತಾರೆ

No comments:

Post a Comment

ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು....