Monday, 16 December 2019

ಬೋಧಿಸತ್ತ ಅಕಿತ್ತಿ (ಅಕೀತರ್ಿ)ಯವರ ಅಲೋಭತೆ

 ಬೋಧಿಸತ್ತ ಅಕಿತ್ತಿ (ಅಕೀತರ್ಿ)ಯವರ ಅಲೋಭತೆ

ಬಹುಕಾಲದ ಹಿಂದೆ ಬೋಧಿಸತ್ತರು ಎಂಬತ್ತು ಕೋಟಿ ಐಶ್ವರ್ಯ ಇದ್ದಂತಹ ಬ್ರಾಹ್ಮಣನ ಮಗನಾಗಿ ಹುಟ್ಟಿದರು. ಅವರಿಗೆ ಅಕಿತ್ತಿ (ಅಕೀತರ್ಿ) ಎಂದು ಹೆಸರಿಡಲಾಯಿತು. ಕೆಲವರ್ಷ ನಂತರ ಅವರಿಗೆ ತಂಗಿಯು ಜನಿಸಿದಳು. ಆಕೆಯೇ ಯಶೋಮತಿ.
ಬೋಧಿಸತ್ವರು 16ನೇ ವಯಸ್ಸಿನಲ್ಲಿರುವಾಗಲೇ ಅವರ ತಂದೆ-ತಾಯಿಗಳು ಮೃತರಾದರು. ಆಗ ಬೋಧಿಸತ್ವರು ಹೀಗೆ ಚಿಂತಿಸಿದರು. ಇಲ್ಲಿ ಐಶ್ವರ್ಯ ಮಾತ್ರ ಕಾಣಿಸುತ್ತಿದೆ, ಆದರೆ ಸಂಪಾದಿಸಿದವರನ್ನು ನಾನು ಕಾಣದೇ ಹೋಗುತ್ತಿರುವೆನು. ಸಾವಿನ ನಂತರ ಐಶ್ವರ್ಯ ಇಲ್ಲೇ ಇರುತ್ತದೆ. ನಾನು ಸಹಾ ಇದನ್ನು ಬಿಟ್ಟು ಹೋಗಬೇಕಾಗಿದೆ ಎಂದು ಚಿಂತಿಸಿ, ತಂಗಿಗೆ ಆ ಸಂಪತ್ತು ನೀಡಿ ಪಬ್ಬಜಿತರಾಗಲು ನಿರ್ಧರಿಸಿದರು. ಆದರೆ ಅವರು ಇಷ್ಟಪಡದ ಆ ಸಂಪತ್ತು ತಂಗಿಗೂ ಇಷ್ಟವಾಗಲಿಲ್ಲ. ಹೀಗಾಗಿ ಅವರು ಒಂದು ವಾರಕ್ಕೂ ಅಧಿಕಕಾಲ ಇಡೀ ಸಂಪತ್ತನ್ನು ದಾನಮಾಡಿ, ನಂತರ ದೂರದ ಸ್ಥಳಕ್ಕೆ ತಲುಪಿ ಪರ್ಣಕುಟೀರವನ್ನು ನಿಮರ್ಿಸಿಕೊಂಡು ವಾಸಿಸಲಾರಂಭಿಸಿದರು. ಇದರಿಂದಾಗಿ ಅವರ ಕೀತರ್ಿ ಬಹುವಾಗಿ ವ್ಯಾಪಿಸಿತು. ಅವರ ಹೆಸರಲ್ಲೇ ಸ್ಥಳಗಳನ್ನು ಹೆಸರಿಸಿದರು. ಅಕೀತರ್ಿದ್ವಾರ, ಅಕೀತಿ ತೀರ್ಥ ಇತ್ಯಾದಿ. ಬೋಧಿಸತ್ವರಿಂದ ಪ್ರೇರೇಪಿತರಾಗಿ ಬಹುಜನರು ತಾವು ಸಹಾ ಪಬ್ಬಜಿತರಾಗಿ ಅವರ ಸಂಗಡ ನೆಲೆಸಿದರು. ಹೀಗೆ ನಡೆದರೆ ಸತ್ಕಾರ ಲಾಭ ಸಿಗುವುದು. ಆದರೆ ದ್ಯಾನಲಾಭ ಸಿಗದೆಂದು ಬೋಧಿಸತ್ವರು ಯಾರಿಗೂ ತಿಳಿಸದೆ ಅಹಿ ಎಂಬ ದ್ವೀಪದಲ್ಲಿ ನೆಲೆಸಿದರು.
ಬೋಧಿಸತ್ತರು ಅತ್ಯಂತ ಅಲ್ಪೆಚ್ಛೆವುಳ್ಳವರಾಗಿದ್ದರು. ತಾವು ಧ್ಯಾನಿಸುತ್ತಿದ್ದ ಮರದ ಹಣ್ಣು ಮತ್ತು ಎಲೆಗಳನ್ನು ತಿಂದೇ ಅವರು ಜೀವಿಸುತ್ತಿದ್ದರು. ಬೇರೆಲ್ಲೂ ಹೋಗುತ್ತಿರಲಿಲ್ಲ. ಆಗ ಇವರ ದೃಢನಿಧರ್ಾರಕ್ಕೆ ಆಕಷರ್ಿತನಾಗಿ ಇಂದ್ರನು ಯಾಚನೆ ಬಂದಾಗ ತಮಗೆಂದು ಇಟ್ಟಿದ್ದ ಎಲೆಗಳ ಆಹಾರವನ್ನೇ ದಾನವಾಗಿ ಅಪರ್ಿಸಿ ತಾವು ಉಪವಾಸದಿಂದಲೇ ಧ್ಯಾನಿಸಿದರು. ಹೀಗೆಯೇ ಮೂರು ದಿನವೂ ಪುನರಾವತರ್ಿತವಾಯಿತು. ಆಗ ಇಂದ್ರ ತನ್ನ ನಿಜರೂಪ ತೋರಿಸಿ, ಇಂತಹ ಸಂತೃಪ್ತ, ಧ್ಯಾನಜೀವನದ ಉದ್ದೇಶವನ್ನು ಕೇಳಿದನು. ಆಗ ಬೋಧಿಸತ್ವರು ಬುದ್ಧತ್ವವೇ ತಮ್ಮ ಉದ್ದೇಶವೆಂದು ಹೇಳಿದರು. ಇವರ ಉತ್ತರದಿಂದ ಸಂತೋಷಗೊಂಡ ಇಂದ್ರ ಅವರಿಗೆ ವರಗಳನ್ನು ಕೇಳಿಕೋ ಎಂದಾಗ ಅವರು ಈ ಬಗೆಯ ವರಗಳನ್ನು ಕೇಳಿಕೊಂಡರು.
ನನಗೆ ಯಾವ ವಸ್ತುವಿನಲ್ಲಾಗಲಿ, ವಿಷಯದಲ್ಲಿಯಾಗಲಿ, ಯಾವ ವ್ಯಕ್ತಿಯಲ್ಲಾಗಲಿ ಲೋಭ ಉಂಟಾಗದಿರಲಿ.
ನನ್ನಲ್ಲಿ ದ್ವೇಷ ಉಂಟಾಗದಿರಲಿ.
ನಾನು ಮೂರ್ಖರನ್ನು ದಶರ್ಿಸದಿರಲಿ, ಸಂಧಿಸದಿರಲಿ.
ನಾನು ಸದಾ ವಿವೇಕಿಯನ್ನೇ ಕಾಣುವಂತಾಗಲಿ.
ಮತ್ತೆ ನೀವು ನನಗೆ ಕಾಣದಿರಲಿ, ಏಕೆಂದರೆ ಕಾಮನೆಗಳನ್ನು ಪೂರೈಸುವ ನಿಮ್ಮಿಂದ, ನಾನು ಪ್ರಮಾದಿಯಾಗದಿರಲಿ.
ನಂತರ ಇಂದ್ರನು ಹಾರೈಸಿ ಮಾಯವಾದನು.

No comments:

Post a Comment

ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು....